ಬರಹ: ಶರೋನ್ ಶೆಟ್ಟಿ ಐಕಳ
ಬಂಟ್ಸ್ ನ್ಯೂಸ್.ಕಾಂ: ಈ ಕಾಲವೇ ಹಾಗೆ ಯಾವಾಗ ಹೇಗೆ ಬದಲಾಗುತ್ತೋ ಹೇಳೋಕ್ಕಾಗಲ್ಲ. ಇವತ್ತು ಇದ್ದ ಹಾಗೆ ನಾಳೆ ಇರೋದಿಲ್ಲ. ಕಾಲಕ್ಕೆ ತಕ್ಕಂತೆ ಮನಸುಗಳು ಆಚಾರಗಳು ವಿಚಾರಗಳು ಬದಲಾಗುತ್ತಿರುತ್ತವೆ!?. ಶತ ಶತಮಾನಗಳಿಂದಲೂ ದಾಸ್ಯ ದಲ್ಲಿ ಬದುಕಿದ, ಶೋಷಣೆಯಿಂದ ನರಳಿದ ವರ್ಗವೊಂದಿದ್ದರೆ ಅದು ಸ್ತ್ರೀ ಯೆ ಅನ್ನುವುದು ಸದಾ ಸರ್ವದಾ ಸತ್ಯ. ಇಂದು ನಿನ್ನೆಯಿಂದಲ್ಲ ಬಹುಶಃ ತ್ರೇತಾಯುಗದಾದಿಯಿಂದಲೂ ಆಕೆ ನರಳುತ್ತಲೇ ಬದುಕಿದ್ದಾಳೆ, ಬೆಳೆದಿದ್ದಾಳೆ.
ಬಂಟ್ಸ್ ನ್ಯೂಸ್.ಕಾಂ: ಈ ಕಾಲವೇ ಹಾಗೆ ಯಾವಾಗ ಹೇಗೆ ಬದಲಾಗುತ್ತೋ ಹೇಳೋಕ್ಕಾಗಲ್ಲ. ಇವತ್ತು ಇದ್ದ ಹಾಗೆ ನಾಳೆ ಇರೋದಿಲ್ಲ. ಕಾಲಕ್ಕೆ ತಕ್ಕಂತೆ ಮನಸುಗಳು ಆಚಾರಗಳು ವಿಚಾರಗಳು ಬದಲಾಗುತ್ತಿರುತ್ತವೆ!?. ಶತ ಶತಮಾನಗಳಿಂದಲೂ ದಾಸ್ಯ ದಲ್ಲಿ ಬದುಕಿದ, ಶೋಷಣೆಯಿಂದ ನರಳಿದ ವರ್ಗವೊಂದಿದ್ದರೆ ಅದು ಸ್ತ್ರೀ ಯೆ ಅನ್ನುವುದು ಸದಾ ಸರ್ವದಾ ಸತ್ಯ. ಇಂದು ನಿನ್ನೆಯಿಂದಲ್ಲ ಬಹುಶಃ ತ್ರೇತಾಯುಗದಾದಿಯಿಂದಲೂ ಆಕೆ ನರಳುತ್ತಲೇ ಬದುಕಿದ್ದಾಳೆ, ಬೆಳೆದಿದ್ದಾಳೆ.
ಅರಸನ ಮಗಳೇ ಆಗಿರಲಿ, ಆಳಿನ ಮಗಳೇ ಆಗಿರಲಿ, ರಾಜನ ಪತ್ನಿಯೇ ಆಗಿರಲಿ ಇಲ್ಲ ಋಷಿ ಪತ್ನಿಯೇ ಆಗಿರಲಿ, ನಿಂದೆ, ಅಪಮಾನ, ಶೋಷಣೆ,ಬವಣೆ ಒಂದೂ ತಪ್ಪಿದ್ದಲ್ಲ. ಸೀತೆ, ದ್ರೌಪದಿ, ಕುಂತಿ, ಅಹಲ್ಯೆ, ಭಾನುಮತಿ, ದಮಯಂತಿ ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಹೆಸರುಗಳು ಮೊಗೆದು ಬರುವುದು. ಪ್ರಕೃತಿಯು ಗಂಡಿನಂತೇ ಹೆಣ್ಣನ್ನು ಸೃಷ್ಠಿಸಿದ್ದರೂ ಆಕೆಗೆ ಅಬಲೆ ಯೆನ್ನುವ ಪಟ್ಟ ಕಟ್ಟಿ ರಕ್ಷಣೆಯೆಯ ನೆಪವೊಡ್ಡಿ ಹೆಜ್ಜೆ ಹೆಜ್ಜೆಗೂ ಥಳಿಸಿ, ತುಳಿದು ಆಕೆಯ ಸ್ವಾತಂತ್ರ್ಯ ಮಾನ ಪ್ರಾಣದ ಹರಣವಾಯ್ತು. ’ಭಾರತೀಯ ಸಂಸ್ಕೃತಿ’ ಯೆನ್ನುವ ಹುಯಿಲಿನಡಿಯಲ್ಲಿ ಆಕೆಯ ಧ್ವನಿ ಕೇಳಿಸದಾಯ್ತು.
ತನ್ನ ಜನ್ಮದತ್ತ ಹಕ್ಕನ್ನು ಹೆಣ್ಣು ಕಾಡಿ ಬೇಡಿ ಕಡೆಗೆ ದಕ್ಕದಿದ್ದಾಗ ಪ್ರತಿಭಟಿಸಿ ಹೋರಾಡಿ ಪಡೆಯಬೇಕಾಯ್ತು. ಇಂದು ತಮ್ಮ ಕ್ಷೇತ್ರದಲ್ಲಿ ಮಹಾನ್ ಸಾಧನೆಗೈದ ಯಾವೊಬ್ಬ ಹೆಣ್ಣಿನ ದಾರಿಯೂ ಸುಗಮವಾಗಿರಲಿಕ್ಕಿಲ್ಲ. ನೂರರಲ್ಲಿ ಒಂದಿಬ್ಬರನ್ನು ಬಿಟ್ಟು! ಆದರೀಗ ಹೆಣ್ನು ತನ್ನ ದಾಸ್ಯವನ್ನು ಕಳೆದುಕೊಳ್ಳುತ್ತಿದ್ದಾಳೆ, ತನ್ನ ದಾಸ್ಸ್ಯದ ಸಂಕೇತಗಳನ್ನೂ(ತಾಳಿ, ಮೂಗುತಿ, ಕಾಲುಂಗುರ ಇತ್ಯಾದಿ) ಕಳಚುತ್ತಿದ್ದಾಳೆ. ಅದು ಸರಿಯೋ ತಪ್ಪೋ ವಿವೇಚನೆಗೆ ಬಿಟ್ಟ ವಿಚಾರ ಆದರೆ ಬಲಾವಣೆಯ ಗಾಳಿ ಬೀಸುತ್ತಿರುವುದು ಸತ್ಯ. ಈ ಗಾಳಿ ಯಾರನ್ನೆಲ್ಲ ಕೊಚ್ಚಿಕೊಂಡು ಹೋಗುವುದೋ ಅದು ಕಾದುನೋದಬೇಕು ಅಷ್ಟೆ.
ಬದಲಾವಣೆ ಸಹಜ ಕ್ರಿಯೆ. ಹೆಣ್ಣು ಯಾವತ್ತಿಗೂ ತಾನು ಬಯಸಿದಂತೇ ಇರಬೇಕು ಎನ್ನುವುದು ತಪ್ಪು. ಯಾವಕಾಲಕ್ಕೂ ಆಕೆ ಶೋಷಿತ ವರ್ಗವೇ ಆಗಿರಬೇಕು ಎಂಬ ನಿಯಮವೇ ಏಕಿರಬೇಕು? ನೆನಪಿಸಿಕೊಳ್ಳಿ ಮೇಲ್ವರ್ಗದವರಿಂದ ಶೋಷಿತಲ್ಪಟ್ಟ ದಲಿತವರ್ಗ ಇಂದು ಯಾವ ಸ್ಥಿತಿಯಲ್ಲಿದೆ ಹಾಗೂ ಮೇಲ್ವರ್ಗದವರ ಸ್ಥಿತಿಯೇನಾಗಿದೆ! ಇದು ನಮಗೆ ಮಾನ್ಯವಾದರೆ ಹೆಣ್ಣಿನ ಸ್ವಾತಂತ್ರ್ಯಯಾಕೆ ಅಪಥ್ಯ? ಆಕೆ ಯಾರೊಟ್ಟಿಗೆ ಹೋದಳೋ, ಎಲ್ಲಿ ಮಲಗಿದಳೊ, ಎಲ್ಲಿ ಎದ್ದಳೊ, ತಾಳಿ ಕಿತ್ತಳೊ ಮೇಲೆ ಹಾರಿದಳೊ, ಕೆಳಗೆ ಬಿದ್ದಳೊ. ನಮಗ್ಯಾಕೆ ಚಿಂತೆ?
"ಕರ್ಮಣ್ಯೇ ವಾಧಿಕಾರಸ್ತೇ ಮಹಾಫಲೇಷು ಕದಾಚನ" ಎಂದು ಸ್ವತಃ ಪರಮಾತ್ಮನೇ ಹೇಳಿರುವಾಗ ಅವಳ ತಪ್ಪು ಒಪ್ಪು, ಧರ್ಮಾಧರ್ಮಗಳ ಲೆಕ್ಕಚಾರ ನಮಗೇಕೆ? ತಪ್ಪು ಎಂದು ಗೊತ್ತಾದಾಗ ತಿದ್ದಿ ನಡೆಯುವ ಸಾಮರ್ಥ್ಯ ಗಂಡಿನಷ್ಟೇ ಅವಳಿಗೂ ಇದೆಯಲ್ಲವೆ? ತಪ್ಪು ಮಾಡುವ ಹಕ್ಕು ಗಂಡಿಗೆ ಮಾತ್ರ ಸ್ಥಾಪಿತವೆ? ಸದಾ ಹೆಣ್ಣಿಗೇ’ಸಂಸ್ಕೃತಿಯ’ ಹೊದಿಕೆ ಹೊರಿಸಿ ದಾಸ್ಯದ ಬೇಡಿ ತೊಡಿಸಿ ತಾನು ಗೆದ್ದೆ ತಾನು ಗಂಡು ತಾನು ಮಾಡಿದ್ದೇ ಸರಿ ಎನ್ನುವ ವಿಕೃತ ಮನಸೇಕೆ? ಕಾಲ ಬದಲಾಗುತ್ತಿದೆ ಜೊತೆಗೆ ಹೆಣ್ಣು ಕೂಡಾ ಬದಲಾಗುತ್ತಿದ್ದಾಳೆ.
ತನ್ನ ಸುತ್ತ ಪುರುಷ ಬಲವಂತವಾಗಿ ತೊಡಿಸಿದ ಪೊರೆಯನ್ನ ಕಳಚುತ್ತಿದ್ದಾಳೆ. ಯಾರಿಗೆ ಇಷ್ಟವಿರಲಿ ಬಿಡಲಿ ಆಕೆಯಂತೂ ಮದಗಮನೆಯಾಗುತ್ತಿದ್ದಾಳೆ. ಹಾಗಾದರೆ ನಾವು ನೀವು ಏನು ಮಾಡೋಣ? ವ್ಯರ್ಥ ಹುಯಿಲೆಬ್ಬಿಸುವುದ ಬಿಟ್ಟು ಕಾಲಯ ತಸ್ಮೈ ನಮಃ ಎನ್ನೋಣ. ನಮ್ಮ ನಮ್ಮ ಕೆಲಸ ನೋಡೋಣ!
www.buntsnews.com
www.buntsnews.com